ಜಯ ಜಯ ಮೆಸ್ಸಿಯನಿಗೆ

ಜಯ ಜಯ ಮೆಸ್ಸಿಯನಿಗೆ
ಜಯ ಜಯ ಹೊಸ್ಸಿಯನಿಗೆ
ಈ ಶುಭ ದಿನದೊಳು ದಾವಿದ ಕುಲದೊಳು
ಜನಿಸಿದ ಯೇಸು ಕಂದ

ಆಹಾಹ... ಹಲ್ಲೇಲೂಯ
ಓಹೊಹೋ... ಹೋಸಾನ
ಲಾಲಾಲ ... ಹಲ್ಲೆಲೂಯಾ ಆಮೇನ್

ಲೋಕದ ರಕ್ಷಕ ಪಾಪ ನಿವಾರಕ
ದೀನ ಉದ್ಧಾರಕನು
ಪ್ರೇಮದ ದೂತ ಪಾಪಿಯ ಮಿತ್ರ
ನರನಾಗಿ ಉದಯಿಸಿದ

ಆಹಾಹ... ಹಲ್ಲೇಲೂಯ
ಓಹೊಹೋ... ಹೋಸಾನ
ಲಾಲಾಲ ... ಹಲ್ಲೆಲೂಯಾ ಆಮೇನ್

ಮಂದೆಯ ಕುರುಬರು
ಕಂದನ ಸುದ್ಧಿಯ ಚಂದದಿ ಸಾರಿದರು
ಲೋಕದಿ ಕರ್ತನ ವಂದಿಸಲೋಸುದ
ತಂದರು ಕಾಣಿಕೆಯ

ಆಹಾಹ... ಹಲ್ಲೇಲೂಯ
ಓಹೊಹೋ... ಹೋಸಾನ
ಲಾಲಾಲ ... ಹಲ್ಲೆಲೂಯಾ ಆಮೇನ್

ಮೇಲಿನ ಲೊಕದಳು
ದೇವಗೆ ಮಹಿಮೆ ಭುವಿಯೊಳು ಸಮಾದಾನ
ಹರುಶದಿ ಹಾಡುತ್ತ ಬಂದರು ಧೂತರು
ಮಹಾಮುದಾದಿಂದ

ಆಹಾಹ... ಹಲ್ಲೇಲೂಯ
ಓಹೊಹೋ... ಹೋಸಾನ
ಲಾಲಾಲ ... ಹಲ್ಲೆಲೂಯಾ ಆಮೇನ್