ಜಗದೆಲ್ಲೆಡೆ ಶಾಂತಿಯ ಸಾರೋಣ

ಜಗದೆಲ್ಲೆಡೆ ಶಾಂತಿಯ ಸಾರೋಣ
ಸರ್ವ ಜನರೇ ನಾವೆಲ್ಲಾ
ಕ್ರೀಸ್ತ ದೇವರ ಅನು ದಿನ ಭಜಿಸೋಣ
ನಿತ್ಯ ಹಾಡಿ ಹಲ್ಲೆಲೂಯಾ

ದಯ ಮಯ ಆ ಯೇಸುವು
ಶಮೆಯ ಸಾಗರಾ
ಪಾಲಿಪನು ತನ್ನಯ
ಶಿಷ್ಯರ ನಿರಂತರ(೨)

ಜಗದೆಲ್ಲೆಡೆ ಶಾಂತಿಯ ಸಾರೋಣ
ಸರ್ವ ಜನರೇ ನಾವೆಲ್ಲಾ
ಕ್ರೀಸ್ತ ದೇವರ ಅನು ದಿನ ಭಜಿಸೋಣ
ನಿತ್ಯ ಹಾಡಿ ಹಲ್ಲೆಲೂಯಾ

ನಿಸ್ವಾರ್ಥದಿ ಸನ್ಮಾರ್ಗದಿ
ನಿತ್ಯವೂ ಬಾಳೋಣ
ಕ್ರಿಸ್ತನನ್ನು ಎಂದೆಂದಿಗೂ
ಸ್ತುತಿಸುತ ಹಾಡೋಣ(೨)