Index Page

ಇನ್ಯಾರು ನಿನ್ನ ಆಪ್ತರು

ಇನ್ಯಾರು ನಿನ್ನ ಆಪ್ತರು
ಕ್ರಿಸ್ತೇಸು ಒಬ್ಬನೇ ಸದಾ
ಸ್ವೀಕಾರಿಸು ಈ ಆಪ್ತನಾ
ಯೇಸುವೆ ನನ್ನಾತ್ಮ ರಕ್ಷಕ

ನಿನಾಪ್ತ ಯೇಸು ಬಂದನು
ನಿಂಗಾಗಿ ಜಾತನಾದನು
ನಿನ್ನನ್ನು ಕೊಂಡುಕೊಂಡನು
ನೀನಲ್ಲ ಶಾಪಗ್ರಸ್ತನು

ಲೋಕ ವಿಹಾರದಾಪ್ತನು
ನಿನ್ನಾಪ್ತ ಶಾಂತಿ ನೀಡ್ವನು
ಹೃದಾಯ ತಿಳಿದಾತನು
ಆತ್ಮಾದ ಆಪ್ತ ಕ್ರಿಸ್ತನು

ಇನ್ಯಾರು ನಿನ್ನ ಆಪ್ತರು
ಕ್ರಿಸ್ತೇಸು ಒಬ್ಬನೇ ಸದಾ
ಸ್ವೀಕಾರಿಸು ಈ ಆಪ್ತನಾ
ಯೇಸುವೆ ನನ್ನಾತ್ಮ ರಕ್ಷಕ

ಮಹಿಮಾ ಕಿರೀಟ ಬಯಸದೆ
ಪಾಪಿಯ ಸ್ಥಾನ ವಹಿಸಿ
ನಮ್ಮೆಲ್ಲ ದ್ರೋಹ ಸಹಿಸಿ
ಪ್ರಾಣವ ಕೊಟ್ಟ ಆಪ್ತನೇ

ಇನ್ಯಾರು ನಿನ್ನ ಆಪ್ತರು
ಕ್ರಿಸ್ತೇಸು ಒಬ್ಬನೇ ಸದಾ
ಸ್ವೀಕಾರಿಸು ಈ ಆಪ್ತನಾ
ಯೇಸುವೆ ನನ್ನಾತ್ಮ ರಕ್ಷಕ

ಪವಿತ್ರ ಐಕ್ಯಕ್ಕಾಗಿಯೇ
ಕರೆಯುತ್ತಾನೆ ನಿನ್ನನ್ನು
ಸ್ವರ್ಗೀಯ ಕರೆ ಲಾಲಿಸಿ
ಆಶ್ರಯಿಸು ಈ ಆಪ್ತನಾ

ಇನ್ಯಾರು ನಿನ್ನ ಆಪ್ತರು
ಕ್ರಿಸ್ತೇಸು ಒಬ್ಬನೇ ಸದಾ
ಸ್ವೀಕಾರಿಸು ಈ ಆಪ್ತನಾ
ಯೇಸುವೆ ನನ್ನಾತ್ಮ ರಕ್ಷಕ