ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2
1. ಪ್ರೀತಿ ಪ್ರೀತಿ ಎಂದು ಹುಡುಕಲು
ನಿಜವಾದ ಪ್ರೀತಿ ಇಲ್ಲ – 2
ನಿನ್ ಪ್ರೀತಿಯೇ ನನಗೆ ಸಾಕಾಯ್ಯಾ
ಬೇರೇನೂ ಬೇಡ ಯೇಸಯ್ಯಾ – 2
ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2
2. ನಾ ನಂಬಿದಾ ನನ್ನವರೂ
ನನ್ನ ದಾರಿಗೆ ಮುಳ್ಳಾದರು – 2
ನಾ ಯಾರನ್ನು ನಂಬಲಿ ಯೇಸಯ್ಯಾ
ನಿನ್ನ ಬಿಟ್ಟರೆ ನನಗೆ ಯಾರಿಲ್ಲ – 2
ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2
3. ಈ ಲೋಕದಾ ಜನರೂ
ಮುಖ ನೋಡಿ ಪ್ರೀತಿಸುವರು -2
ನನ್ನ ಹೃದಯವಾ ನೋಡಿ ಪ್ರೀತಿಸಿದೆ
ನಿನ್ನಂತ ದೇವರು ಯಾರು ಇಲ್ಲ – 2
ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2