ಹೆದರದಿರು ನನ್ನ ಮನವೇ...
ನೀನು ಕದಲದಿರು ನನ್ನ ಮನವೆ
|| ಸ್ತುತಿಸು... ಸ್ತುತಿಸು ಯೇಸಪ್ಪನಾ... ಸ್ತುತಿಸು ||
|| ಆರೋಗ್ಯವಿಲ್ಲವೆಂದು ಭಯಪಡಬೇಡ ||
|| ಯೆಹೋವ ರಫಾ ನಿನಗಿರುವಾಗ
ಆರೋಗ್ಯವೇ ನಿನ್ನ ಭಾಗ್ಯವು ||
ಹೆದರದಿರು ನನ್ನ ಮನವೇ...
ನೀನು ಕದಲದಿರು ನನ್ನ ಮನವೆ
|| ಸ್ತುತಿಸು... ಸ್ತುತಿಸು ಯೇಸಪ್ಪನಾ... ಸ್ತುತಿಸು ||
|| ಗತಿ ಯಾರೂ ಇಲ್ಲವೆಂದು ಚಿಂತಿಸಬೇಡ ||
|| ಯೆಹೋವ ಯಿರೇ ನಿನಗಿರುವಾಗ
ಜೊತೆಯಿದ್ದು ಕಾಪಾಡುವ ||
ಹೆದರದಿರು ನನ್ನ ಮನವೇ...
ನೀನು ಕದಲದಿರು ನನ್ನ ಮನವೆ
|| ಸ್ತುತಿಸು... ಸ್ತುತಿಸು ಯೇಸಪ್ಪನಾ... ಸ್ತುತಿಸು ||
|| ಜೀವನದಿ ಸೋಲೆಂದು ಸೋತುಹೋದೆಯಾ ||
|| ಯೆಹೋವ ನಿಸ್ಸಿಯೇ ನಿನಗಿರುವಾಗ
ಎಂದಿಗೂ ಜಯ ಕೊಡುವನು ||
ಹೆದರದಿರು ನನ್ನ ಮನವೇ...
ನೀನು ಕದಲದಿರು ನನ್ನ ಮನವೆ
|| ಸ್ತುತಿಸು... ಸ್ತುತಿಸು ಯೇಸಪ್ಪನಾ... ಸ್ತುತಿಸು ||
|| ಸಮಾಧಾನ ಇಲ್ಲವೆಂದು
ಅಲೆಯುತ್ತಿರುವೆಯಾ ||
|| ಯೆಹೋವ ಶಾಲೋಂ ನಿನಗಿರುವಾಗ
ಸಮಾಧಾನದಿ ನಿನ್ನ ನಡೆಸುವಾ ||
ಹೆದರದಿರು ನನ್ನ ಮನವೇ...
ನೀನು ಕದಲದಿರು ನನ್ನ ಮನವೆ
|| ಸ್ತುತಿಸು... ಸ್ತುತಿಸು ಯೇಸಪ್ಪನಾ... ಸ್ತುತಿಸು ||