Index Page

ಹಾಡಿದೆ ಈ ಹ್ರದಯವು ಹಾಡಿದೆ

ಹಾಡಿದೆ ಈ ಹ್ರದಯವು ಹಾಡಿದೆ
ಪ್ರೇಮದ ಭಾವದಿ ಒಲುಮೆಯ ಗೀತೆಯ
ಹ್ರನ್ಮನ ಹಾಡಿದೆ

ವಸಂತ ಕಾಲದಿ ನವ್ಯ ರಾಗದಿ
ಕೋಗಿಲೆ ಹಾಡುವಂತೆ....೨
ಮನವೆನ್ನ ಪ್ರಭುವೆ ಸೇರಿ ಈ ಆಲಯ
ಸಂಭ್ರಮದಿ ನಲಿದಾಡಿದೆ

ಸೋಲು ಗೆಲುವಲ್ಲಿ ನೋವು ನಲಿವಲ್ಲಿ
ಕೈ ಹಿಡಿದು ಮುನ್ನಡೆಸುವೆ
ಕ್ಷಣ ಕ್ಷಣವು ನಿನ್ನ ಜೊತೆಗಿರಲು ದೇವ
ಅನುಗ್ರಹಿಸು ನಾ ಬೇಡುವೆ

ಹಾಡಿದೆ ಈ ಹ್ರದಯವು ಹಾಡಿದೆ
ಪ್ರೇಮದ ಭಾವದಿ ಒಲುಮೆಯ ಗೀತೆಯ
ಹ್ರನ್ಮನ ಹಾಡಿದೆ