ಎಂಥಾ ಘೋರ ಮೌನವಿಂದು

ಎಂಥಾ ಘೋರ ಮೌನವಿಂದು ಲೋಕದ ರಕ್ಷಕರು ಮಡಿದರು ಎಂದು ಓ ಮನುಜ ನೀ ನೋಡು ಶಿಲುಭೆಯ ಮೇಲೆ ಪ್ರಭುವಿನ ಪಾಡು ಈ ಕಷ್ಟವು ನಮ್ಮ ಪಾಪಕ್ಕಾಗಿ ಈ ಯಾತನೆ ನಮ್ಮ ತಪ್ಪಿಗಾಗಿ ಸಹಿಸಿದರು ನಮ್ಮೆಲ್ಲರ ರಕ್ಷಣೆಗಾಗಿ
// ಎಂಥಾ ಘೋರ//

ಕಡುಗೆಂಪು ವರ್ಣದ ವಸ್ತ್ರವ ತೊಟ್ಟು ಶಿರಬಾಗಿ ನಿಂತರು ಅಪರಾಧಿಯಂತೆ ಭೂಸ್ವರ್ಗ ರಾಜ್ಯದ ರಾಜಾಧಿರಾಜಗೆ ಶಿರದಲ್ಲಿ ಮುಳ್ಳಿನ ಕಿರೀಟವಂತೆ ಚಾಟಿಯ ಹೊಡೆತವ ಸಹಿಸಿದರು ರಕ್ತದ ಧಾರೆಯ ಎರೆದಿಹರು ಹೊಸಾನ್ನ
ಹೊಸಾನ್ನ ಎಂದ ಜನರು ಶಿಲುಭೆಗೆ ಏರಿಸಿ ಎನ್ನುತ್ತಿರಲು ಮೌನವಾಗಿ ಪ್ರಭು ನಿಂತರು ಮನದಲೆ ಬಹಳ ನೊಂದುಕೊಂಡರು.

//ಪ್ರಭುವೇ...ಪ್ರಭುವೇ... ಪ್ರಭುವೇ... ಪ್ರಭುವೇ..//2//

ಶಿಲುಭೆಯ ಹೊರುತ ನಡೆದರು ಯೇಸು ಬೀಳುತ ಏಳುತ ಕಲ್ವಾರಿಯ ಕಡೆಗೆ ತೊಟ್ಟಿಹ ಬಟ್ಟೆಗೆ ಚೀಟು ಹಾಕಲು ಬೆತ್ತಲೆಯಾಗಿ ನಿಂತರು ಕೊನೆಗೆ ಹಿಂಸಿಸಿದವರ ಕ್ಷಮಿಸಿದರು ಶಿಷ್ಯಗೆ ತಾಯಿಯಒಪ್ಪಿಸಿದರು
ದಾಹವೆಂದು ಹುಳಿರಸ ಕುಡಿದು
ಎಲ್ಲವು ನೆರವೇರಿತು ಎಂದು ನುಡಿದು ಆತ್ಮವ ತಂದೆಗೆ ಒಪ್ಪಿಸಿದರು ಶಿರಬಾಗಿ ತಮ್ಮ ಪ್ರಾಣ ತೆತ್ತರು

///ಪ್ರಭುವೇ...ಪ್ರಭುವೇ... ಪ್ರಭುವೇ...ಪ್ರಭುವೇ..//2//