Index Page

ಎನ್ನ ಹೃದಯ ಕಾದಿದೆ

ಎನ್ನ ಹೃದಯ ಕಾದಿದೆ
ದೇವಾ ನಿನ್ನ ಬಯಸಿದೆ
ನಿನ್ನನಗಲಿ ಬಾಡಿದೆ
ಜೀವ ನೀಡು ಬೇಡುವೆ
ಬಾ ಯೇಸು ಬಾ (೬)

ನೆಲೆಯೆ ಇಲ್ಲದ ಮನುಜಗೆ
ನೆರಳು ನೀನೆ ಆಗಿಹೆ (೨)
ಅವರ ನೆಲೆಯ ಕಾಣಲು (೨)
ಬಾ ಎಂದು ಕರೆಯುವೆ (೨)

ಎನ್ನ ಹೃದಯ ಕಾದಿದೆ
ದೇವಾ ನಿನ್ನ ಬಯಸಿದೆ
ನಿನ್ನನಗಲಿ ಬಾಡಿದೆ
ಜೀವ ನೀಡು ಬೇಡುವೆ
ಬಾ ಯೇಸು ಬಾ (೬)

ಹಸಿವೆಯಿಂದ ನರಳುವ
ಎನಗೆ ನೀನೆ ಆಸರೆ (೨)
ಅವರ ತೃಪ್ತಿ ನೀಗಲು
ಬಾ ಎಂದು ಕರೆಯುವೆ (೨)