ನಿನ್ನ ಹಾಗೆ ಯಾರುಂಟು
ಒಳ್ಳೇದನ್ನು ಮಾಡಲು
ನಿನ್ನನ್ನೇ ನಂಬುವೆ ನನ್ ದೇವ (2)
ನನ್ನಯ ಬಾಳಲಿ ನೀನೇ
ಆಧಾರವೆಂದು ನಂಬಿರುವೆ
ನೀನಿಲ್ಲದ ನನ್ನ ಜೀವಿತ
ವ್ಯರ್ಥವಾಗಿ ಹೋಗುವುದು....(2)
ಎಲ್ ಷಡಾಯ್ ಆರಾಧಿಸ್ವೆ
ಎಲೋಹಿಮ್ ಆರಾಧಿಸ್ವೆ
ಆಡೋನಾಯ್ ಆರಾಧಿಸ್ವೆ
ಯೇಸುವೇ ಆರಾಧಿಸ್ವೆ (2)
ದಿಕ್ಕಿಲ್ಲದೆ ನಿಂತ ನನ್ನ
ಕಣ್ಣೀರ ಒರಸಿದವನೇ
ಕಾಲವೆಲ್ಲಾ ಕಣ್ಮಣಿಯಂತೆ
ಕರ ಹಿಡಿದು ಕಾಯುವವನೇ (2)
ಎಲ್ ಷಡಾಯ್ ಆರಾಧಿಸ್ವೆ
ಎಲೋಹಿಮ್ ಆರಾಧಿಸ್ವೆ
ಆಡೋನಾಯ್ ಆರಾಧಿಸ್ವೆ
ಯೇಸುವೇ ಆರಾಧಿಸ್ವೆ (2)
ಮರಣದ ಹಾದಿಯಲ್ಲಿ
ಮನನೊಂದು ನಿಂತ ನನಗೆ
ಘನ ವೈದ್ಯನಾಗಿ ಬಂದು
ಹೊಸ ಜೀವ ನನಗೆ ತಂದೆ (2)
ಎಲ್ ಷಡಾಯ್ ಆರಾಧಿಸ್ವೆ
ಎಲೋಹಿಮ್ ಆರಾಧಿಸ್ವೆ
ಆಡೋನಾಯ್ ಆರಾಧಿಸ್ವೆ
ಯೇಸುವೇ ಆರಾಧಿಸ್ವೆ (4)