ಎದ್ದೇಳಿ ವೀರರೆ ಸುವಾರ್ತೆಸಾರುವ

ಎದ್ದೇಳಿ ವೀರರೆ ಸುವಾರ್ತೆಸಾರುವ
ನಾವೆಲ್ಲರು ಸೇರಿ ||ಕ್ರೀಸ್ತನ ಆಲಯ ಕಟ್ಟೋಣ ||

ಮಂದಿರದಸ್ತಿವಾರವು ಯೇಸು ||ಯೇಸು ದೇವಾ||
ಅದರೊಳಗಿದ್ದನು ದೇವಾದಿ ದೇವಾ||ದೇವಾದಿ ದೇವಾ||
ಸಮರ್ಪಿಸುವಾ ಜೀವಂತ ಕಲ್ಲುಗಳ ಒಡಿ ತನ್ನಿ ಪರ್ವತದಿಂದ
ಸುತ್ತ ಮುತ್ತ ಹುಡುಕಿರಿ ನೀವು || ನಾವೆಲ್ಲರು ಸೇರಿ ||
ಕ್ರೀಸ್ತನ ಆಲಯ ಕಟ್ಟೋಣ

ಎದ್ದೇಳಿ ವೀರರೆ ಸುವಾರ್ತೆಸಾರುವ
ನಾವೆಲ್ಲರು ಸೇರಿ ||ಕ್ರೀಸ್ತನ ಆಲಯ ಕಟ್ಟೋಣ ||

ಕಲ್ಲು ಮಣ್ಣು ಸ್ವಾಮಿಗೆ ಬೇಡ ||ಸ್ವಾಮಿಗೆ ಬೇಡ||
ಸಜಿವ ಕಲ್ಲಾದ ನೀವೆ ಬೇಕು ||ನೀವೆ ಜೇಕು ||
ಅಪೆಕ್ಷೇಯಿಂದ ಹುಡುಕೋಣ ಬನ್ನಿ
ಕಾರ್ಗತ್ತಲಲ್ಲಿ ಚದರಿರುವ ಜನರ ||2||
|| ನಿತ್ಯ ಜೀವದ ಬೇಳಕಿಗೆ ತಂದು ||
ನಾವೆಲರು ಸೇರಿ ಕ್ರೀಸ್ತನ ಆಲಯ ಕಟ್ಟೋಣ

ಎದ್ದೇಳಿ ವೀರರೆ ಸುವಾರ್ತೆಸಾರುವ
ನಾವೆಲ್ಲರು ಸೇರಿ ||ಕ್ರೀಸ್ತನ ಆಲಯ ಕಟ್ಟೋಣ ||

ಆಲಸ್ಯ ತ್ಯಜಸಿ ಬಂಧನ ಬಿಡಿಸಿ ||ಬಂಧನ ಬಿಡಿಸಿ
ನಂಬಿಕೆಯಿಂದ ದೃಡವಾಗಿದ್ದು ||ದೃಡವಾಗಿದ್ದು ||
ಸಾರಿರಿ ರಕ್ಷಣೆ ಸುವಾರ್ತೆಯನ್ನು ಜಯಿಸಿರಿ ಅನೇಕ ಆತ್ಮಗಳನ್ನು
ದೇವರ ಆತ್ಮನ ಸಾಮರ್ಥ್ಯದಿಂದ
ಶೂರರು ವೀರರಾಗಿ ಕ್ರೀಸ್ತನ ಆಲಯ ಕಟ್ಟೋಣ

ಎದ್ದೇಳಿ ವೀರರೆ ಸುವಾರ್ತೆಸಾರುವ
ನಾವೆಲ್ಲರು ಸೇರಿ ||ಕ್ರೀಸ್ತನ ಆಲಯ ಕಟ್ಟೋಣ ||