Index Page

ದಿವ್ಯಾಶೀರ್ವಾದದ ಮಳೆ

ದಿವ್ಯಾಶೀರ್ವಾದದ ಮಳೆ
ಸುರಿಯ ಮಾಡುವೆನು
ಎಂದು ನಿನ್ ವಾಗ್ದಾನವನ್ನು
ನೆನಪು ಮಾಡುವೆನು

ಓ ಪ್ರಿಯ ಯೇಸು
ನಿನ್ ವಾಗ್ದಾನವ ನಂಬಿ
ಧೈನ್ಯದಿ ಬೇಡ್ವೆವು ಈಗ
ನಮ್ಮನಾದರಿಸಯ್ಯ

ಆದಿ ನಿನ್ ಶಿಷ್ಯರೆಲ್ಲರೂ
ನಿನ್ ವಾಗ್ದಾನವ ನಂಬಿ
ಪ್ರಾರ್ಥನೆ ಮಾಡಿದ ವೇಳೆ
ನೀನಾಶೀರ್ವದಿಸಿದಿ

ಓ ಪ್ರಿಯ ಯೇಸು
ನಿನ್ ವಾಗ್ದಾನವ ನಂಬಿ
ಧೈನ್ಯದಿ ಬೇಡ್ವೆವು ಈಗ
ನಮ್ಮನಾದರಿಸಯ್ಯ

ವಾಗ್ದಾನ ಮಾಡಿದವನು
ನಂಬಿಗಸ್ತನು ನೀನು
ನಿನ್ ಕ್ರಪೆಯಿಂದಲೇ ಮಾತ್ರ
ನಮ್ಮನ್ನಾಶೀರ್ವದಿಸು

ಓ ಪ್ರಿಯ ಯೇಸು
ನಿನ್ ವಾಗ್ದಾನವ ನಂಬಿ
ಧೈನ್ಯದಿ ಬೇಡ್ವೆವು ಈಗ
ನಮ್ಮನಾದರಿಸಯ್ಯ

ನಿನ್ನಾಶೀರ್ವಾದವ ಹೊಂದಿ
ಧ್ರಢದಿ ನಿಲ್ಲುವೆವು
ಧೈರ್ಯದಿ ಸಾಕ್ಷಿಯ ಕೊಟ್ಟು
ನಿನ್ ಸೇವೆ ಮಾಡುವೆವು

ಓ ಪ್ರಿಯ ಯೇಸು
ನಿನ್ ವಾಗ್ದಾನವ ನಂಬಿ
ಧೈನ್ಯದಿ ಬೇಡ್ವೆವು ಈಗ
ನಮ್ಮನಾದರಿಸಯ್ಯ