ದೇವಗೆ ಮಹಿಮೆ

ದೇವಗೆ ಮಹಿಮೆ ಮಹೋನ್ನತದಿ
ಭುವಿಯೊಳು ಸುಮನ ಜನಕೆ ಶಾಂತಿ

ಕರ್ತನು ನಮ್ಮಯ ದೇವನು ನೀ
ಪರಲೋಕದ ನಿಜ ಒಡೆಯನು ನೀ
ಸರ್ವ ಸಮಸ್ತ ಪಿತನು ನೀ
ಆರಾಧಿಸುವೆನು ನಿನ್ನನ್ನು

ನಿನ್ನುಪಕಾರವ ಸ್ಮರಿಸುವೆವು
ನಿನ್ನ ಮಹಿಮೆಯನು ಹೊಗಳುವೆವು
ಕರ್ತ ನೀ ಯೇಸು ಕ್ರಿಸ್ತನೀ
ಪರಮ ಪಿತನು ನಿನ್ನ ತನಯನೆ

ದೇವಗೆ ಮಹಿಮೆ ಮಹೋನ್ನತದಿ
ಭುವಿಯೊಳು ಸುಮನ ಜನಕೆ ಶಾಂತಿ

ಕರ್ತನೆ ದೇವರ ಕುರಿ ಮರಿಯೆ
ಧರಣಿಯ ಪಾಪ ಪರಿಹರಿಪನೇ
ಬಲಬದಿ ತಂದೆಯ ಕುಳಿತಿಹನೆ
ಲಾಲಿ ಸು ನೀ ಕರುಣಾಕರನೇ

ನೀನೇ ಓರ್ವನು ಪಾವನನು
ನೀನೇ ಓರ್ವನು ಅಧಿಪತಿಯು
ಓರ್ವನು ನೀನು ಮಹೋನ್ನತನು
ಪರಮ ಪಿತನ ವ್ಯ ಮಹಿಮೆಯೊಳು

ದೇವಗೆ ಮಹಿಮೆ ಮಹೋನ್ನತದಿ
ಭುವಿಯೊಳು ಸುಮನ ಜನಕೆ ಶಾಂತಿ

ಪಾವನ ಆತ್ಮರೋಡನೆ ಸತತಾ
ದೇವ ಸುತನಿಗೆ ಮಹಿಮೆ ಸದಾ
ಪಾವನ ಆತ್ಮರೋಡನೆ ಸತತಾ
ದೇವ ಪಿತನಿಗೆ ಮಹಿಮೆ ಸದಾ