ಭಯವೇನಿಲ್ಲಾ ಸಂತೋಷವೇ
ಯೇಸು ಎನ್ ಆತ್ಮ ಗೆಳೆಯನೇ
ಸ್ವರ್ಗದ ಭಾಗ್ಯ ಭಾದ್ಯತೆಯೇ
ನನಗೆ ಉಂಟು ಅಭಯವೇ
ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮ ಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ
ಪರಿಶುದ್ದಾತ್ಮ ನನ್ನಲ್ಲಿಯೇ
ಪವಿತ್ರ ಶಾಂತಿದಾಯಕನೇ
ಯೇಸುವು ಅಂದ ಸತ್ಯವನ್ನೇ
ತೋರಿಸಿಕೊಡ್ವ ಎನ್ನಾತ್ಮಕ್ಕೆ
ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮ ಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ
ಆನಂದವೆಷ್ಟೋ ನಿರೀಕ್ಷೆಯು
ನನ್ನಲ್ಲಿ ತುಂಬಿ ಇರುವುದು
ಯೇಸುವು ಬರ್ವ ಕಾಲವನ್ನು
ಎದುರು ನೋಡಿ ಕಾಯುವೆನು
ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮ ಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ
ಎನ್ ಆತ್ಮದಾಪ್ತ ಬರುವನು
ಆತನ ಕೂಡ ಹೋಗುವೆನು
ಆತನು ನಾನು ಸ್ವರ್ಗದಲ್ಲಿ
ವೈಭವದಿಂದ ಇರುವೆವು
ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮ ಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ