ಬೆತ್ಲೆಹೇಮ್ ಗೋದಲಿಯೊಳು
ದೇವತನಯ ಯೇಸು ಜನಿಸಿದ ||2||
ರಾಜಾಧಿರಾಜ ಯೇಸು ರಾಜ |2|
ಈ ಲೋಕದಲ್ಲಿ ಜನಿಸಿದ
ಅದ್ಭುತ ಸ್ವರೂಪನು ಯೇಸು ಕಂದನು
ಆಲೋಚನಾ ಕರ್ತ ಅದ್ವಿತೀಯ ದೇವ ||2||
ನಿತ್ಯನಾದ ತಂದೆಯು ಸಮಾಧಾನ ರಾಜನು
ಕನ್ಯಾ ಮರಿಯಳಲ್ಲಿಯೇ ಜನಿಸಿ ಬಂದನು ||2||
ಬೆತ್ಲೆಹೇಮ್ ಗೋದಲಿಯೊಳು
ದೇವತನಯ ಯೇಸು ಜನಿಸಿದ ||2||
ಆಕಾಶದಲ್ಲಿ ಮೂಡಿತೊಂದು ನಕ್ಷತ್ರ
ಸಾರಿತಂದು ಯೇಸು ಜನನ ಸರ್ವಸೃಷ್ಟಿಗೆ ||2||
ಮೂಡಣ ಜೋಯಿಸರು ತಾರೆ ಮಾರ್ಗ ಹಿಡಿದರು
ಯೇಸುವನ್ನು ನಮಿಸಲು ಬೆತ್ಲೆಹೇಮಿಗೆ ||2||
ಬೆತ್ಲೆಹೇಮ್ ಗೋದಲಿಯೊಳು
ದೇವತನಯ ಯೇಸು ಜನಿಸಿದ ||2||
ರಾತ್ರಿಯಲ್ಲಿ ಕುರಿಗಳನ್ನು ಕಾಯುವಂತಹ
ಕುರುಬರಿಗೆ ಆಯಿತಂದು ದೂತ ದರ್ಶನ ||2||
ಸರ್ವಲೋಕ ರಕ್ಷಕ ಯೇಸುವನ್ನು ನೋಡಲು
ರಾತ್ರಿಯಲ್ಲಿ ಹೊರಟರು ಬೆತ್ಲೆಹೇಮಿಗೆ ||2||
ಬೆತ್ಲೆಹೇಮ್ ಗೋದಲಿಯೊಳು
ದೇವತನಯ ಯೇಸು ಜನಿಸಿದ ||2||
ರಾಜಾಧಿರಾಜ ಯೇಸು ರಾಜ |2|
ಈ ಲೋಕದಲ್ಲಿ ಜನಿಸಿದ