ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ
ನಿನ್ನ ಕಾಯುವ ಕುರುಬನವ (೨)
ಹುಟ್ಟಿದಾಗ ಏನು ಹೊತ್ತು ತಂದೆ
ಸತ್ತಾಗೇನು ಕೊಂಡುಹೋಗುವೆ ನೀನು (೨)
ಎಲ್ಲಿಂದ ಬಂದೆ ನೀ ಈ ಜಗಕೆ
ಎಲ್ಲಿ ಹೋಗಬೇಕು ನಿನಗೆ ಗೊತ್ತೆ? (೨)
ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ
ನಿನ್ನ ಕಾಯುವ ಕುರುಬನವ
ಪ್ರೇಮಕ್ಕಾಗಿ ಅಲೆದು ಸೋತೆ ನೀನು
ನಂಬಿದವರ ಪ್ರೇಮವೆಲ್ಲ ಸುಳ್ಳು (೨)
ಜೀವಕೊಟ್ಟ ಪ್ರೇಮ ಉಂಟು ನೋಡು
ಶಿಲುಬೆ ಮರಣ ಸತ್ಯ ಪ್ರೇಮ ಕಾಣು (೨)
ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ
ನಿನ್ನ ಕಾಯುವ ಕುರುಬನವ
ಹಣದ ಹಿಂದೆ ಓಡಿದ್ದು ನೀ ಸಾಕು
ಮರಣ ಬರಲು ಹಣವದೆಲ್ಲ ದೂಳು (೨)
ಯೇಸುವಿನ ಹಿಂದೆ ಬೇಗ ಓಡು
ನಿತ್ಯಜೀವ ದಕ್ಕುತ್ತಾಗ ನೋಡು (೨)
ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ
ನಿನ್ನ ಕಾಯುವ ಕುರುಬನವ
ನಾನು ಎಂಬ ಅಹಂಕಾರ ಸಾಕು
ಆರು ಅಡಿ ಮಣ್ಣು ಕೊನೆಗೆ ನೋಡು (೨)
ಸ್ಥಾನ ಮಾನ ಸ್ಥಿರವಲ್ಲ ನೋಡು
ದೀನರಲ್ಲಿ ಯೇಸುವನ್ನು ಕಾಣು (೨)
ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ
ನಿನ್ನ ಕಾಯುವ ಕುರುಬನವ