ಅತ್ಯಂತ ಪ್ರಿಯ ಯೇಸು

ಅತ್ಯಂತ ಪ್ರಿಯ ಯೇಸು ನಿನ್ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದೆ ನಿನ್ನನ್ನೇ ಸೇವಿಸುವೆ(೨)

ದೇವಾದಿ ದೇವನಾಗಿ ಸರ್ವ ವೈಭವದೊಳ್ ವಾಸಿಸಿದೀ
ದೇವದೂತರು ಕೊಂಡಾಡಿದಾಗ್ಯೂ ನಂಗಾಗಿ ತ್ಯಜಿಸಿ ಬಂದೀ

ಕ್ರೂಜಿಯ ಮೇಲೆ ನನಗಾಗಿ ಸ್ವಪ್ರಾಣವನರ್ಪಿಸಿದೀ
ಕಡುಪಾಪಿ ನಾನಾಗಿದ್ದಾಗ್ಯೂ ನನ್ನನ್ನು ಪ್ರೀತಿಸಿದೀ.

ಕ್ರೂರ ಹಿಂಸೆಯಿಂದಾಗಿ ಸತ್ತು ಸಮಾಧಿ ಸೇರಿದಿ ನೀ
ಜಯವೀರನಾಗಿ ಎದ್ದು ಬಂದು ನನ್ನನ್ನು ರಕ್ಷಿಸಿದೀ