ಅಪ್ಪಾ ನಿನ್ ಕರದಲ್ಲಿ ನಾನು
ಜೇಡಿ ಮಣ್ಣಾಗಿರುವಾಗ
ಆ ಜೇಡಿ ಮಣ್ಣಲ್ಲಿ ನೀನು
ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ || 2 ||
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
1 ಕಟ್ಟಲ್ಪಟ್ಟ ಕತ್ತೆಯಾದ ನನ್ನ
ಬಿಡಿಸಿ ಕರೆದಿರುವೆ ನೀ
ನಿನ್ನನ್ನು ಹೊತ್ತು ಸಾಗುವಂತೆ
ನನ್ನನ್ನು ಉಪಯೋಗಿಸಿರುವೆ
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
2 ತಪ್ಪಿ ಹೋದ ಮಗನಂತಿದ್ದೆ
ಎಲ್ಲವನ್ನೂ ಕಳೆದುಕೊಂಡು ಬಂದೆ
ನನ್ನೆಲ್ಲಾ ತಪ್ಪುಗಳ ಕ್ಷಮಿಸಿ
ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ || 2 ||
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ