ಅಪ್ಪಾ ಅಪ್ಪಾ ಯೇಸಪ್ಪ,

ಅಪ್ಪಾ ಅಪ್ಪಾ ಯೇಸಪ್ಪ, ನೀನೇ ನನ್ನ ಸರ್ವಸ್ವ||2||
ನಾನು ನಿನ್ನನ್ನು ಬಿಟ್ಟು ಏನೂ ಮಾಡಲಾರೆನು||2||

ನನ್ನ ನಡೆಯಿಂದಾಗಲಿ ನನ್ನ ನುಡಿಯಿಂದಾಗಲಿ
ನಿನ್ನ ನಾಮವೊಂದೆ ಮಹಿಮೆ ಹೊಂದಲಿ ||2||
ನನ್ನ ಸರ್ವಾಂಗಗಳು ನಿನ್ನ ಸ್ತುತಿ ಮಾಡಲಿ||2||

ಅಪ್ಪಾ ಅಪ್ಪಾ ಯೇಸಪ್ಪ, ನೀನೇ ನನ್ನ ಸರ್ವಸ್ವ||2||
ನಾನು ನಿನ್ನನ್ನು ಬಿಟ್ಟು ಏನೂ ಮಾಡಲಾರೆನು||2||

ಸರ್ವ ಸೃಷ್ಟಿಗೆ ನೀನು ಯಜಮಾನನು
ಸರ್ವ ಲೋಕವು ನಿನಗೆ ಅಡ್ಡಬೀಳಲಿ ||2||
ಸರ್ವ ಜನರು ನಿನ್ನಲ್ಲಿ ಬಂದು ಸೆರಲಿ ||2||

ಅಪ್ಪಾ ಅಪ್ಪಾ ಯೇಸಪ್ಪ, ನೀನೇ ನನ್ನ ಸರ್ವಸ್ವ||2||
ನಾನು ನಿನ್ನನ್ನು ಬಿಟ್ಟು ಏನೂ ಮಾಡಲಾರೆನು||2||

ಯೇಸು ನಾನು ನಿಮ್ಮಲ್ಲಿ ನಿಮ್ಮ ವಾಕ್ಯ ನನ್ನಲ್ಲಿ
ನನ್ನ ಪ್ರಾರ್ಥನೆಯಲಿ ನನಗೆ ಜಯ ಸಿಗಲಿ ||2||
ನಾನು ನಿಮ್ಮಲ್ಲಿ ಇದ್ದು ಬಹಳ ಫಲವ ಕೊಡುವೆನು||2||