Index Page

ಅಣುಗೊಳಿಸಿ ಭೊಜನ

ಅಣುಗೊಳಿಸಿ ಭೊಜನ ಕರೆದೆ ನೀ ಮನುಜನ
ನೀಡಲವಗೆ ಅನುದಿನ ನಿತ್ಯ ಜೀವನ

ಪಾಪಿ ಮನುಜ ತನುವನು
ಕತ್ತಲು ತುಂಬಿಹ ಮನವನು
ಸೆಳೆದ ಆಶಾ ಪಾಶದಿಂ
ಕಳೆದೆ ಪಾಪ ದೋಷವಂ....೨

ಅಣುಗೊಳಿಸಿ ಭೊಜನ ಕರೆದೆ ನೀ ಮನುಜನ
ನೀಡಲವಗೆ ಅನುದಿನ ನಿತ್ಯ ಜೀವನ

ಶಾಂತಿ ರಹಿತ ಜಗವನು
ಸ್ವಾರ್ಥ ಭರಿತ ನರನನು
ಗೈದೆ ನೀನು ಪಾವನಾ
ನೀಡಿ ಸ್ವರ್ಗ ಜೀವನ....೨

ಅಣುಗೊಳಿಸಿ ಭೊಜನ ಕರೆದೆ ನೀ ಮನುಜನ
ನೀಡಲವಗೆ ಅನುದಿನ ನಿತ್ಯ ಜೀವನ

ಸತ್ಯ ಸುಗುಣ ಸಂಪನ್ನನೆ
ನಿತ್ಯ ನಿರ್ಮಲ ಧೀಮಂತನೆ
ಭುಜಿಸಿ ದಿವ್ಯ ಭೋಜನ
ನೆನೆವೆ ನಿನ್ನ ಅನುದಿನ....೨