Index Page

ಆರಾಧನೆ

ಸ್ತುತಿಗೆ ಯೋಗ್ಯನೆ
ಮಾನನಿಗೆ ಪಾತ್ರನೇ
ಆರಾಧನೆಗೇ ಅರ್ಹನೇ
ಆರಾಧನೆ (೮)

ಸ್ವರ್ಗೀಯ ಧೂತರು ಸ್ತುತಿಸುವರು
ನಿನ್ ಪಾದಕೆ ಎರಗಿ ಆರಾಧಿಸುವರು (೨)
ಶುದ್ಧನು ಶುದ್ಧನು ಪರಿಶುದ್ಧನೆಂದು
ನಿನಗೆ ಹಾಡುವರು (೨)

ಭೂನಿವಾಸಿಗಳು ಅಡ್ಡಬೀಳುವರು
ನಿನ್ನನ್ನೇ ಪ್ರಭುವೆಂದು ಅರಿಕೆಮಾಡುವರು (೨)
ಸರ್ವಜನರು ಸರ್ವಕುಲಗಳು
ನಿನ್ನಾರಾಧಿಸುವರು (೨)

ನನ್ನಯ ಜೀವಿತವನ್ನು ಯೇಸು
ನಿನ್ನಯ ಪಾದಕೆ ಎರಗುವೆನು (೨)
ನಿನಗಾಗಿ ನಾನು ಜೀವಿಸುವೆನು
ನನ್ನನ್ನು ಸ್ವೀಕರಿಸು (೨)