ಆಧಾರ ನೀ ಬೇಕಯ್ಯ x2
ಎನ್ ಬಾಳ ಬೆಳಗಿ ಬೆಳಕಾಗಿ ಇರಲು
ಆಧಾರ ನೀ ಬೇಕಯ್ಯ
ಮತಿ ಹೀನನಾಗಿ ನಿನ್ ಮರೆತು
ದೇವಾ ದೂರಕ್ಕೆ ಹೊಗದ ಹಾಗೆ
ನಿನ್ನಾತ್ಮ ಹೊಂದಿ ಬಾಳಲು ಎನಗೆ
ಬಲವನ್ನು ನೀ ನೀಡಯ್ಯ
ಕಷ್ಟದ ಕಡಲಲ್ಲಿ ಮಳುಗಿ
ದೇವಾ ತೀರದ ಭಯದಲ್ಲಿ ಇರಲು
ಅಭಯಾವ ನೀಡಿ ದಾರಿಯ ತೋರಲು
ಹತ್ತಿರಕ್ಕೆ ನೀ ಬಾರಯ್ಯ
ಆಧಾರ ನೀ ಬೇಕಯ್ಯ x2
ಎನ್ ಬಾಳ ಬೆಳಗಿ ಬೆಳಕಾಗಿ ಇರಲು
ಆಧಾರ ನೀ ಬೇಕಯ್ಯ
ಎನ್ ಪ್ರಾಣ ಪ್ರಿಯನೇ ಯೇಸು
ನಿನ್ ರಕ್ಷಣೆ ನಿತ್ಯವು ಎನಗೆ
ತಪ್ಪದೆ ನೀಡಿ ಮುಪ್ಪಿನ ವರೆಗೆ
ಕೈ ಹಿಡಿದು ಕಾಪಡಯ್ಯ
ಆಧಾರ ನೀ ಬೇಕಯ್ಯ x2
ಎನ್ ಬಾಳ ಬೆಳಗಿ ಬೆಳಕಾಗಿ ಇರಲು
ಆಧಾರ ನೀ ಬೇಕಯ್ಯ